ಮೈದಾಳದಲ್ಲಿ ದಿಲ್‌ಕಾ ರಾಜಾ
Posted date: 01 Fri, Feb 2013 ? 11:05:53 AM

ಎಸ್.ವಿ.ಎಸ್. ಪ್ರೊಡಕ್ಷನ್ಸ್ ಲಾಂಛನದಲ್ಲಿ ವಿಶ್ವನಾಥರೆಡ್ಡಿ, ಶ್ರೀಮತಿ ಗಂಗಾ ಆರ್. ಪಾಟೀಲ್ ಕೂಡಿ ನಿರ್ಮಿಸುತ್ತಿರುವ ದಿಲ್‌ಕಾ ರಾಜಾ ಚಿತ್ರಕ್ಕೆ ತುಮಕೂರು ಬಳಿ ಇರುವ ಮೈದಾಳದಲ್ಲಿ ಪ್ರಜ್ವಲ್, ರಮ್ಯ, ನಾಗಿನೀಡು ಮುಂತಾದವರು ಅಭಿನಯಿಸಿದ ದೃಶ್ಯಗಳ ಚಿತ್ರೀಕರಣ ನಡೆಯಿತು. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ - ಸೋಮನಾಥ ಪಾಟೀಲ್, ಸಂಗೀತ - ಅಭಿಮನ್ ರಾಯ್, ಛಾಯಾಗ್ರಹಣ - ಕೆ.ಕೆ. ಸೆಂದಿಲ್ ಕುಮಾರ್, (ಇವರು ಐತೆ, ಯಮದೊಂಗ, ಅರುಂಧತಿ, ಛತ್ರಪತಿ, ಮಗಧೀರ, ಈಗ, ಚಿತ್ರಗಳ ಛಾಯಾಗ್ರಾಹಕ) ಕನ್ನಡದಲ್ಲಿ ಮೊದಲಬಾರಿಗೆ ಕ್ಯಾಮೆರಾ ಕೈಚಳಕ ತೋರಿಸಲಿದ್ದಾರೆ, ಸಂಕಲನ - ಕೆ.ಎಂ. ಪ್ರಕಾಶ್, ಸಹಕಾರ ನಿರ್ದೇಶನ - ಹೇಮಂತ್, ನಿರ್ವಹಣೆ - ಪ್ರಕಾಶ್ - ಪ್ರತಾಪ್, ಕಲೆ-ಇಸ್ಮಾಯಿಲ್, ತಾರಾಗಣದಲ್ಲಿ ಮೊದಲಬಾರಿಗೆ ಪ್ರಜ್ವಲ್-ರಮ್ಯ ಜೋಡಿಯಾಗಿ ಅಭಿನಯಿಸುತ್ತಿರುವ ಚಿತ್ರ, ಅಲ್ಲದೆ ನಾಗಿನೀಡು, ಜೈಜಗದೀಶ್, ಸಾದುಕೋಕಿಲ, ವಿಣಾ ಸುಂದರ್, ಅಶೋಕ್, ಅಮಿತ್, ಸಂತೋಷ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed